 ಎಲ್ಬ್‌ 
ಮಧ್ಯ ಯುರೋಪಿನ ಒಂದು ಮುಖ್ಯ ನದಿ, ಬೊಹೀಮಿಯ ಪೀಠಭೂಮಿಯಲ್ಲಿ ಹುಟ್ಟಿ, ಚೆಕೋಸ್ಲವಾಕಿಯ ಮತ್ತು ಜರ್ಮನಿಗಳಲ್ಲಿ ಹರಿದು ಹ್ಯಾಂಬರ್ಗಿನಲ್ಲಿ ಉತ್ತರ ಸಮುದ್ರ ಸೇರುವ ಈ ನದಿಯ ಉದ್ದ ಸು. 1100 ಕಿಮೀ ಮೊದಲು ಇದು ದಕ್ಷಿಣಾಭಿಮುಖವಾಗಿ ಹರಿಯುತ್ತದೆ. 4600' ಎತ್ತರದಿಂದ 700' ಎತ್ತರದ ಇಳಿಜಾರು ನೆಲಕ್ಕೆ ಧುಮುಕಿ, ಪಾರ್ಡುಬಿಟ್ಸೆ ಬಳಿ ಪಶ್ಚಿಮದ ಕಡೆ ತಿರುಗಿ, ಬೊಹೀಮಿಯದ ಅತ್ಯಂತ ವಿಶಾಲ ಹಾಗೂ ಫಲವತ್ತಾದ ಬಂiÀÄಲನ್ನು ಪ್ರವೇಶಿಸುತ್ತದೆ. ಅನಂತರ ವಾಯವ್ಯಾಭಿಮುಖವಾಗಿ ಹರಿಯುವ ಈ ನದಿಗೆ ಮೆಲ್ನಿಕ್ ಮತ್ತು ಲಿಟೊಮೆರಿಸ್ ಬಳಿ ಕ್ರಮವಾಗಿ ವಲ್ಟಾವ ಮತ್ತು ಏಗರ್ ಉಪನದಿಗಳು ಬಂದು ಸೇರುತ್ತವೆ. ಬೊಹೀಮಿಯವನ್ನು ಬಿಡುವುದಕ್ಕೆ ಮುಂಚೆ, ಎಟ್ರ್ಸ್‌ಗೆಬಿರ್ಜೆ ಪರ್ವತಾವಳಿಗಳಲ್ಲಿನ ಆಳವಾದ ಪ್ರಪಾತಗಳನ್ನು ಹಾಯ್ದು ಹೋಗುತ್ತದೆ. ಇದುವರೆಗೆ ಚೆಕೋಸ್ಲವಾಕಿಯದಲ್ಲಿ ಕ್ರಮಿಸಿದ ನದಿ ಅನಂತರ ಜರ್ಮನಿಯಲ್ಲಿ ಹರಿಯುತ್ತದೆ.

ಡ್ರೆಸ್ಡೆನ್ನಿಂದ ಉತ್ತರ ಸಮುದ್ರ ಸೇರುವ ವರೆಗೆ ಈ ನದಿ ಹರಿಯುವ ಪ್ರದೇಶ ಸಮಮಟ್ಟವಾದದ್ದು. ಆಗ ಸಾಮಾನ್ಯವಾಗಿ ಇದರ ದಿಕ್ಕು ವಾಯವ್ಯ. ತಿರುವು ಮುರಿವಾಗಿ ಸಾಗುವ ಈ ನದಿ ಮುಂದೆ ಹರಿಯುವುದು ಹಿಮಚಲನೆಯಿಂದುಂಟಾದ, ಪ್ರಾಚೀನ ನದಿಕೊಳ್ಳಗಳ ಹಾದಿಯಲ್ಲಿ. ಇದನ್ನು ಕೂಡಿಕೊಳ್ಳುವ ಎರಡು ನದಿಗಳು ಮೂಲ್ಡೆ ಮತ್ತು eóÁಲೆ. ಇವು ಲೈಪ್ಸಿಗ್ ಕೈಗಾರಿಕಾವಲಯಕ್ಕೆ ಮಾತೃರೂಪದಂತಿವೆ. ಮ್ಯಾಗ್ಡೆಬರ್ಗ್ನಿಂದ ಹ್ಯಾಂಬರ್ಗ್ವರೆಗೆ ನದಿಯ ಎರಡೂ ದಡಗಳು ಜೌಗು ಪ್ರದೇಶಗಳಿಂದ ಕೂಡಿವೆ. ಆದರೆ ನೀರನ್ನು ಹೊರತೆಗೆದು ಹುಲ್ಲುಗಾವಲುಗಳನ್ನು ನಿರ್ಮಿಸಿರುವುದರಿಂದ ಇಲ್ಲಿ ಸಾಮಾನ್ಯ ಜನವಸತಿಯುಂಟು. ಅನೇಕ ಕಾಲುವೆಗಳ ಮುಖಾಂತರ ಇದಕ್ಕೂ ಇತರ ನದಿಗಳಿಗೂ ಸಂಪರ್ಕ ಕಲ್ಪಿಸಲಾಗಿದೆ. 
ಎಲ್ಬ್‌ ನದಿ ಸಮುದ್ರ ಸೇರುವ ಎಡೆಯಿಂದ ಒಳಕ್ಕೆ 140 ಕಿಮೀ ದೂರದಲ್ಲಿರುವ ಜಂಟಿ ಬಂದರುಗಳೇ ಹ್ಯಾಂಬರ್ಗ್‌ ಮತ್ತು ಆಲ್ಟೊನ. ಈ ಬಳಿಯಲ್ಲಿ ಎಲ್ಬಿನಿಂದ ಹೊರಟು ಬಾಲ್ಟಿಕ್ ಸಮುದ್ರ ಸೇರುವ ಕೀಲ್ ಕಾಲುವೆ ಇದೆ.

ಈ ನದಿಯ ಜಲಾನಯನ ಪ್ರದೇಶ 90123.264ಕಿಮೀ ಸರಾಸರಿಯಲ್ಲಿ ಸೆಕೆಂಡಿಗೆ 7315.2ಮೀ ನೀರು ಈ ನದಿಯಲ್ಲಿ ಹರಿಯುತ್ತದೆ, ಇದು ಪರಿಮಾಣದಲ್ಲಿ ರೈನ್ ನದಿಯ 1/3ರಷ್ಟು. ಈ ನದಿಯ ಕೆಳಭಾಗ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ. (ಕೆ.ಆರ್.ಆರ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ